ಕಾಳಗಿ : ಇಂದಿನ ತಂತ್ರಜ್ಞಾನ ಯುಗದಲ್ಲಿ ಪರಿಸರ ವಿನಾಶದತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೋಡ್ಲಿ ಹೀರೆಮಠದ ಬಸವಲಿಂಗ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.
ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಲಯದ ಆವರಣದಲ್ಲಿ 150 ಸಸಿ ನೆಡುವ ಮೂಲಕ ಲಿಂಗೈಕ್ಯ ದಿ. ಕಂಟೇಪ್ಪ ಮಾಸ್ಟರ್ ಅವರ 10ನೇ ಪುಣ್ಯ ಸ್ಮರಣೆ ನಿಮಿತ್ಯ ಸಮೃದ್ಧಿ ಫೌಂಡೇಶನ್ ಹಾಗೂ ರೇವಣಸಿದ್ದೇಶ್ವರ ಜೀರ್ಣೋದ್ಧಾರ ಸೇವಾ ಸಂಸ್ಥೆ ಹಮ್ಮಿಕೊಂಡ ಮರ ಬೆಳೆಸಿ – ನಾಡು ಉಳಿಸಿ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಮನೆಗೊಂದು ಮರ ಬೆಳೆಸಿ ನಾಡು ಉಳಿಸಲು ಮುಂದಾಗಬೇಕು ಎಂದರು.
ಪ್ರಸ್ತುತ ಕಲ್ಯಾಣ ನಾಡಿನಲ್ಲಿ ನೆರೆ-ಬರ ಉಂಟಾಗಲು ಮನುಷ್ಯ ಜೀವಿಗಳೆ ಕಾರಣಿಭೂತರಾಗಿದ್ದು, ನಮ್ಮ ತಪ್ಪುಗಳು ತಿದ್ದಿಕೊಂಡು ಸಮಾಜದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ ಬೆಳೆಸಲು ಸಜ್ಜಾಗಬೇಕು. ಸಮೃದ್ಧಿ ಫೌಂಡೇಶನ್ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಶೇಶಿಕಾಂತ ಆಡಕಿ, ರಾಜಕುಮಾರ ಚಿಕ್ಕ ಅಗಸಿ, ಶರಣು ಬುಬಲಿ,ಅಣ್ಣರಾವ ಪೇದ್ದಿ, ಮಲ್ಲಪ್ಪ ಚಿಂತಕೋಟಿ, ವಿಜಯಕುಮಾರ ಚೆಂಗಟಿ, ಡಾ. ಪಾಟೀಲ, ಎನ್. ಎಸ್.ಪಾಟೀಲ್, ಶಿವಕುಮಾರ ಸುಲೇಪೇಟ, ಶಿವಶಣಪ್ಪ ಸಜ್ಜನಶೇಟ್ಟಿ, ಮಲ್ಲು ಮರಗುತ್ತಿ, ಮಲ್ಲಿಕಾರ್ಜುನ ಚಿಕ್ಕ ಅಗಸಿ, ಸಿದ್ದು ಕಂತಿ, ಮಲ್ಲು ಜುಜ್ಜಿ ಹಾಗೂ ಜೀವನ ಸಾಧನೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.



